ಬದುಕಿದ್ದೇನೆ ಬುದ್ಧಿ ಜೀವಿಯಾಗಿ
ಮನೆಯ ಸುತ್ತಲೂ ಬೇಲಿಹಾಕಿದ್ದೇನೆ
ಕಿಟಕಿಗಳಿಗೆ ಜಾಲರಿ ಬಡಿಸಿದ್ದೇನೆ
ನೆರಳಿಗೆಂದು ಒಂದು, ಚಂದಕ್ಕೆರಡು
ತೆಂಗಿನ ಗಿಡ ನೆಟ್ಟಿದ್ದೇನೆ
ಆದರೆ ಯಾರಿಗೂ ಒಂದು ಕಾಯಿ ಕೊಟ್ಟಿಲ್ಲ
ಜಿರಳೆ, ಹುಳ ಸೊಳ್ಳೆ ಸಾಯಿಸಲು ಔಷಧಿಯನ್ನಿಟ್ಟಿದ್ದೇನೆ,
ಬೇಕಾದಾಗ ಮಳೆ ತರಿಸಿದ್ದೇನೆ
ಆಟಗಳು ರದ್ದಾಗದಂತೆ ಮಳೆ ತಡೆದಿದ್ದೇನೆ
ಹರಿಯುವ ನೀರನ್ನು ಕಟ್ಟಿ ನಿಲ್ಲಿಸಿದ್ದೇನೆ
ಆದರೆ ಬಾಯಾರಿದವರಿಗೆ ಒಂದು ಲೋಟ ನೀರು ಕೊಟ್ಟಿಲ್ಲ
ಪದವಿ ಮೇಲೆ ಪದವಿ ಪಡೆದಿದ್ದೇನೆ
ಸರ್ವಜ್ಯ್ನನಿಂದ ಹಿಡಿದು ಮೂರ್ತಿಯವರೆಗೂ ಓದಿದ್ದೇನೆ
ಆದರೆ ಮಾತಿಗೆ ಮಾತು ಬೆಳೆಸಿ
ಜಗಲಕ್ಕೆ ನಿಂತುಬಿಡುತ್ತೇನೆ
ಧ್ಯಾನ ಮಾಡುತ್ತೇನೆ ಪೂಜೆ ಮಾಡುತ್ತೇನೆ
ತುಪ್ಪದ ದೀಪ ಹಚ್ಚುತ್ತೇನೆ, ಕಕ್ಕುಲಾತಿಯ ಮಾತನಾಡಿ
ಒಳ್ಳೆಯವನೆಂದೆನಿಸಿಕೊಳ್ಳುತ್ತೇನೆ. ಆದರೆ
ಪರರ ಏಲ್ಗೆ ಕಂಡು ಒಳಗೊಳಗೇ ಹಲ್ಲುಮಸೆಯುತ್ತೇನೆ.
ಬದುಕಿದ್ದೇನೆ ಬುದ್ಧಿ ಜೀವಿಯಾಗಿ
ಹದ್ದು ಬಡಿಯುತ್ತೇನೆ, ಹಾವು ಬಡಿಯುತ್ತೇನೆ
ಕದ್ದು ಮುಚ್ಚಿ ಹೆಂಗಸರ ಎದೆಯ ನೋಡುತ್ತೇನೆ
ಮತ್ತೆ ರಾಮ ಬುದ್ಧ, ಹನುಮನಂತೆ ಪೋಸು ಕೊಡುತ್ತೇನೆ
ಆತ್ಮಸಾಕ್ಷಿಯ ನ್ಯಾಯಾಲಯಕ್ಕಂಜಿ
ಎಲ್ಲವನು ಬಿಟ್ಟು ಬದಲಾಗುವ ಇಚ್ಛೆ ತೊಟ್ಟು
ಮೌನಿಯಾಗುತ್ತೇನೆ.
ಜಗತ್ತು ಒಂದೇ ಸಮನೆ ಕೇಳತೊಡಗುತ್ತದೆ
Anything wrong with you theese days ?
ಮತ್ತೆ ಬದುಕುತ್ತೇನೆ ಬುದ್ಧಿ ಜೀವಿಯಾಗಿ.
creating the sense
Wtiting is an easy task but writing well is difficult. I simply write,well..!Readers may find it interesting!
Monday, March 8, 2010
ಚಂದ ಮಾಮ ಬರನು ಅದು ತಾಯಿಗೆ ಗೊತ್ತು
ಕರೆದೂ ಕರೆದು ಮಗುವಾಯಿತ್ತು ಸುಸ್ತು
ಮಗುವಾಗಿದ್ದಾಗ ಮಾವನಾಗಿದ್ದ ಚಂದ್ರ
ಈಗ ತಾಯಿಗೆ ಅಣ್ಣ, ತನ್ನ ಮಗುವಿಗೆ ಮಾವ
ಅವಳಿಗೂ ಗೊತ್ತು ತಾನು ಸುಳ್ಳಿ ಎಂದು
ಚಂದ್ರನ ತೋರಿಸಿಯೇ ತರಿಸಿದೆನೆಂದು
ನಂಬಿಸುವಳು ಮಗುವ. ತಂದೆ ನಗುವ.
ಅವನು ಅಷ್ಟೇ, ಒಂದೇ ಒಂದು ದಿನ ಹಾಗೆ...
ಅಮ್ಮನ ಹಾಗೆ ತಟ್ಟೆಯಲಿ ನೀರ್ಹಾಕಿ
ಚಂದ್ರನ ತರೆಸಿಲ್ಲ ಅವ- ಮಹಾ ಸೋಂಬೇರಿ
ಕೃಷ್ಣನಿಗೆ ಯಶೋಧೆ ಗುಮ್ಮನ ತೋರಿಸಿದಳೆಂದು
ಆ ಯಶೋಧೆಯಾನೆ ಬಯ್ಯುವಳು ಇವಳು
'ಛೆ! ತನ್ನ ಕಂದಮ್ಮನಿಗೇ ಗುಮ್ಮನ ತೋರಿಸುವುದೇ?
ಎಂಥ ತಾಯಿ?'
ಮಗು ಅಮ್ಮ ಅಮ್ಮ ಎಂದು ಬಾಯಿ ನೊಂದು ಮಲಗಿದಾಗ
ತಾಯ ಕಣ್ಣು ನೊಂದು, ನೀರು ಬತ್ತಿ
ಬಿಕ್ಕಳಿಸಿರಲಿಕ್ಕೂ ಸಾಕು.
ಪ್ರೀತಿಯೋ, ವಾತ್ಸಲ್ಲವೋ,ಮಾಯೆಯೋ
ಅಂದ ದಲ್ಲ್ಲಾ ತಪ್ಪು, ಕರೆದದ್ದೆಲ್ಲ ಸರಿ
ಕಪ್ಪೋ ಬಿಳುಪೋ
ಶಾಂತಸಾಗರದ ನೀಲಿಯೋ ಬಣ್ಣ?
ಬರೀ ಕಣ್ಣ ಬೆರಗಿಗೆ ಹಿಗ್ಗಿ ಸೋತವಳಿಗೆ
ಯಾವುದಾದರೇನು ಬಣ್ಣ.
ಕಾಲನೋದ್ದು ಹಾಲು ಕುಡಿವಾಗ ಆದ ಆನಂದ
ದೈವ ಲೀಲೆ!
ಕುಂಡೆಯೂರಿ ಕೂತು, ಮೊಂಡೆಯೂರಿ ನಡೆದು
ಒಂದೊಂದೇ ಹೆಜ್ಜೆ ಇಟ್ಟು, ಎರಡಕ್ಷರದ ಮಾತಾಡಿ
ತನ್ನ ಬಾಲಲೇಲೆಗಳನಾಡಿ, ನಾಲ್ಕಕ್ಷರದ ಮಾತು
ಕಲಿಯುವದರಲೇ ತಾಯ ಋಣ ತೀರಿಸಿತು ಮಗು
ಮಹಾದಾನಂದ ಸಾಗರವನೇ ಕುಡಿಸಿ
ತಾಯಿಗೆ ಹೆರಿಗೆ ನೋವ ಮರೆಸಿ
ಕರೆದೂ ಕರೆದು ಮಗುವಾಯಿತ್ತು ಸುಸ್ತು
ಮಗುವಾಗಿದ್ದಾಗ ಮಾವನಾಗಿದ್ದ ಚಂದ್ರ
ಈಗ ತಾಯಿಗೆ ಅಣ್ಣ, ತನ್ನ ಮಗುವಿಗೆ ಮಾವ
ಅವಳಿಗೂ ಗೊತ್ತು ತಾನು ಸುಳ್ಳಿ ಎಂದು
ಚಂದ್ರನ ತೋರಿಸಿಯೇ ತರಿಸಿದೆನೆಂದು
ನಂಬಿಸುವಳು ಮಗುವ. ತಂದೆ ನಗುವ.
ಅವನು ಅಷ್ಟೇ, ಒಂದೇ ಒಂದು ದಿನ ಹಾಗೆ...
ಅಮ್ಮನ ಹಾಗೆ ತಟ್ಟೆಯಲಿ ನೀರ್ಹಾಕಿ
ಚಂದ್ರನ ತರೆಸಿಲ್ಲ ಅವ- ಮಹಾ ಸೋಂಬೇರಿ
ಕೃಷ್ಣನಿಗೆ ಯಶೋಧೆ ಗುಮ್ಮನ ತೋರಿಸಿದಳೆಂದು
ಆ ಯಶೋಧೆಯಾನೆ ಬಯ್ಯುವಳು ಇವಳು
'ಛೆ! ತನ್ನ ಕಂದಮ್ಮನಿಗೇ ಗುಮ್ಮನ ತೋರಿಸುವುದೇ?
ಎಂಥ ತಾಯಿ?'
ಮಗು ಅಮ್ಮ ಅಮ್ಮ ಎಂದು ಬಾಯಿ ನೊಂದು ಮಲಗಿದಾಗ
ತಾಯ ಕಣ್ಣು ನೊಂದು, ನೀರು ಬತ್ತಿ
ಬಿಕ್ಕಳಿಸಿರಲಿಕ್ಕೂ ಸಾಕು.
ಪ್ರೀತಿಯೋ, ವಾತ್ಸಲ್ಲವೋ,ಮಾಯೆಯೋ
ಅಂದ ದಲ್ಲ್ಲಾ ತಪ್ಪು, ಕರೆದದ್ದೆಲ್ಲ ಸರಿ
ಕಪ್ಪೋ ಬಿಳುಪೋ
ಶಾಂತಸಾಗರದ ನೀಲಿಯೋ ಬಣ್ಣ?
ಬರೀ ಕಣ್ಣ ಬೆರಗಿಗೆ ಹಿಗ್ಗಿ ಸೋತವಳಿಗೆ
ಯಾವುದಾದರೇನು ಬಣ್ಣ.
ಕಾಲನೋದ್ದು ಹಾಲು ಕುಡಿವಾಗ ಆದ ಆನಂದ
ದೈವ ಲೀಲೆ!
ಕುಂಡೆಯೂರಿ ಕೂತು, ಮೊಂಡೆಯೂರಿ ನಡೆದು
ಒಂದೊಂದೇ ಹೆಜ್ಜೆ ಇಟ್ಟು, ಎರಡಕ್ಷರದ ಮಾತಾಡಿ
ತನ್ನ ಬಾಲಲೇಲೆಗಳನಾಡಿ, ನಾಲ್ಕಕ್ಷರದ ಮಾತು
ಕಲಿಯುವದರಲೇ ತಾಯ ಋಣ ತೀರಿಸಿತು ಮಗು
ಮಹಾದಾನಂದ ಸಾಗರವನೇ ಕುಡಿಸಿ
ತಾಯಿಗೆ ಹೆರಿಗೆ ನೋವ ಮರೆಸಿ
Om Beach
ನಾನು ಎನ್ನುವರೆಲ್ಲ ನಿನ್ನ ಮುಂದೊಮ್ಮೆ ಬರಲಿ
ಆ ಅರ್ಭಟ ರಭಸ ಭೋರ್ಗರೆತಗಳು
ಎಂಥವನ ಎದೆಯನ್ನೂ ನಡುಗಿಸಲೇ ಬೇಕು
ಅಷ್ಟಲ್ಲದೇ ನೀ ಜಗತ್ ಸೃಷ್ಟಿಕರ್ತಳೇ ಹೇಳು?
ನಿನ್ನ ಆಳ ಅಗಲ ಶಕ್ತಿ ಸಾಮರ್ಥ್ಯ
ಆಕಾಶ ಭೂಮಿ ಒಂದು ಮಾಡಿ ನಿಂತ ಪರಿ
ನಿನ್ನ ಅಧ್ಬುತ, ರೌದ್ರ ಮತ್ತೆ ಪ್ರಶಾಂತ ಮೌನ
ನನ್ನ ಅಣೆ ಗಾತ್ರದ ಕಣ್ಣುಗಳಲಿ ತುಂಬಿಕೊಳಲು
ಹೇಗೆ ಸಾಧ್ಯ.
ಆ ಅರ್ಭಟ ರಭಸ ಭೋರ್ಗರೆತಗಳು
ಎಂಥವನ ಎದೆಯನ್ನೂ ನಡುಗಿಸಲೇ ಬೇಕು
ಅಷ್ಟಲ್ಲದೇ ನೀ ಜಗತ್ ಸೃಷ್ಟಿಕರ್ತಳೇ ಹೇಳು?
ನಿನ್ನ ಆಳ ಅಗಲ ಶಕ್ತಿ ಸಾಮರ್ಥ್ಯ
ಆಕಾಶ ಭೂಮಿ ಒಂದು ಮಾಡಿ ನಿಂತ ಪರಿ
ನಿನ್ನ ಅಧ್ಬುತ, ರೌದ್ರ ಮತ್ತೆ ಪ್ರಶಾಂತ ಮೌನ
ನನ್ನ ಅಣೆ ಗಾತ್ರದ ಕಣ್ಣುಗಳಲಿ ತುಂಬಿಕೊಳಲು
ಹೇಗೆ ಸಾಧ್ಯ.
Lullaby
ಮಲಗು ಮುದ್ದಿನ ಕಂದ
ಮಲಗು ಶ್ರೀ ಗಿರಿಯ ಗೋವಿಂದ
ಮಲಗು ನನ್ನ ಇಂದ್ರ ಚಂದ್ರ- ಜೋ ಜೋ
ಬಗೆ ಬಗೆಯ ಆಟಗಳ ಆಡಿ ಆಡಿಸಿದ್ದು ಸಾಕು
ನನ್ನ ಸೋಲಿಸಿ ಅಳಿಸಿ ನಗಿಸಿದ್ದು ಸಾಕು
ಆಡಿ ಆಡಿ ಸೋತ ಕಾಲನೋತ್ತುವೆ ಮಲಗು-ಜೋ ಜೋ
ಊರ ಚೆಲುವಿಯರೆಲ್ಲ ನಿನ್ನ ನೋಡಲು ಬಂದು
ದ್ರಿಷ್ಟಿ ತಾಗಿತು ಎಂದು
ದ್ರಿಷ್ಟಿತೆಗೆಯುವೆನು ಕಂದ ಮಲಗು- ಜೋ ಜೋ
ಮನೆಯ ಕೆಲಸವ ನಿನ್ನ ಅಪ್ಪ ಮಾಡುವನೇನೋ
ಮುಪ್ಪು ಬಂದಿರೋ ಮುದುಕಿ
ಎಷ್ಟು ಹಿಡಿವಳೋ ನಿನ್ನ ಮಲಗು-ಜೋ ಜೋ
ಚೆಲುವು ಅಂದರೆ ನಿಂದೆ
ಒಲವು ಅಂದರೆ ನಿಂದೆ, ಮಗನೆ
ಹಲವು ಬಗೆಯಲಿ ಹಾಡ್ವೆ ಮಲಗು-ಜೋ ಜೋ
ಮಲಗು ಶ್ರೀ ಗಿರಿಯ ಗೋವಿಂದ
ಮಲಗು ನನ್ನ ಇಂದ್ರ ಚಂದ್ರ- ಜೋ ಜೋ
ಬಗೆ ಬಗೆಯ ಆಟಗಳ ಆಡಿ ಆಡಿಸಿದ್ದು ಸಾಕು
ನನ್ನ ಸೋಲಿಸಿ ಅಳಿಸಿ ನಗಿಸಿದ್ದು ಸಾಕು
ಆಡಿ ಆಡಿ ಸೋತ ಕಾಲನೋತ್ತುವೆ ಮಲಗು-ಜೋ ಜೋ
ಊರ ಚೆಲುವಿಯರೆಲ್ಲ ನಿನ್ನ ನೋಡಲು ಬಂದು
ದ್ರಿಷ್ಟಿ ತಾಗಿತು ಎಂದು
ದ್ರಿಷ್ಟಿತೆಗೆಯುವೆನು ಕಂದ ಮಲಗು- ಜೋ ಜೋ
ಮನೆಯ ಕೆಲಸವ ನಿನ್ನ ಅಪ್ಪ ಮಾಡುವನೇನೋ
ಮುಪ್ಪು ಬಂದಿರೋ ಮುದುಕಿ
ಎಷ್ಟು ಹಿಡಿವಳೋ ನಿನ್ನ ಮಲಗು-ಜೋ ಜೋ
ಚೆಲುವು ಅಂದರೆ ನಿಂದೆ
ಒಲವು ಅಂದರೆ ನಿಂದೆ, ಮಗನೆ
ಹಲವು ಬಗೆಯಲಿ ಹಾಡ್ವೆ ಮಲಗು-ಜೋ ಜೋ
14th Feb
ಎಷ್ಟು ಸೊರಗಿರುವೆ ಗೆಳತಿ
ಗೆಳೆಯನ ಚಿಂತೆಯಲಿ
ನವ ವಸಂತಕೆ ಕೋಗಿಲೆ
ಬಂದಂತೆ ಬರುವನೆಂದು ಕಾದು?
ಹಾಡು ಕಟ್ಟಿದ್ದೇನು? ಹಾಡಿ ಕರೆದದ್ದೇನು?
ಏನು ನಿನ್ನ ಪಾಡೇನು ಗೆಳತಿ?
ಬೀಡು ಬಿಟ್ಟದ್ದಾದರೆ ನಿನ್ನ ಪ್ರೀತಿ ಅವನಲಿ, ಅವನದು ನಿನ್ನಲಿ
ಬಂದೇ ಬರುವನು ಇನಿಯ.
ಗೆಳೆಯನ ಚಿಂತೆಯಲಿ
ನವ ವಸಂತಕೆ ಕೋಗಿಲೆ
ಬಂದಂತೆ ಬರುವನೆಂದು ಕಾದು?
ಹಾಡು ಕಟ್ಟಿದ್ದೇನು? ಹಾಡಿ ಕರೆದದ್ದೇನು?
ಏನು ನಿನ್ನ ಪಾಡೇನು ಗೆಳತಿ?
ಬೀಡು ಬಿಟ್ಟದ್ದಾದರೆ ನಿನ್ನ ಪ್ರೀತಿ ಅವನಲಿ, ಅವನದು ನಿನ್ನಲಿ
ಬಂದೇ ಬರುವನು ಇನಿಯ.
Subscribe to:
Posts (Atom)