Monday, March 8, 2010

ಬದುಕಿದ್ದೇನೆ ಬುದ್ಧಿ ಜೀವಿಯಾಗಿ

ಮನೆಯ ಸುತ್ತಲೂ ಬೇಲಿಹಾಕಿದ್ದೇನೆ
ಕಿಟಕಿಗಳಿಗೆ ಜಾಲರಿ ಬಡಿಸಿದ್ದೇನೆ
ನೆರಳಿಗೆಂದು  ಒಂದು, ಚಂದಕ್ಕೆರಡು 
ತೆಂಗಿನ ಗಿಡ ನೆಟ್ಟಿದ್ದೇನೆ 
ಆದರೆ ಯಾರಿಗೂ ಒಂದು ಕಾಯಿ ಕೊಟ್ಟಿಲ್ಲ 

ಜಿರಳೆ, ಹುಳ ಸೊಳ್ಳೆ ಸಾಯಿಸಲು ಔಷಧಿಯನ್ನಿಟ್ಟಿದ್ದೇನೆ,
ಬೇಕಾದಾಗ ಮಳೆ ತರಿಸಿದ್ದೇನೆ
ಆಟಗಳು ರದ್ದಾಗದಂತೆ ಮಳೆ ತಡೆದಿದ್ದೇನೆ
ಹರಿಯುವ ನೀರನ್ನು ಕಟ್ಟಿ ನಿಲ್ಲಿಸಿದ್ದೇನೆ
ಆದರೆ ಬಾಯಾರಿದವರಿಗೆ ಒಂದು ಲೋಟ ನೀರು ಕೊಟ್ಟಿಲ್ಲ 

ಪದವಿ ಮೇಲೆ ಪದವಿ ಪಡೆದಿದ್ದೇನೆ 
ಸರ್ವಜ್ಯ್ನನಿಂದ ಹಿಡಿದು ಮೂರ್ತಿಯವರೆಗೂ ಓದಿದ್ದೇನೆ 
ಆದರೆ ಮಾತಿಗೆ ಮಾತು ಬೆಳೆಸಿ
ಜಗಲಕ್ಕೆ ನಿಂತುಬಿಡುತ್ತೇನೆ

ಧ್ಯಾನ ಮಾಡುತ್ತೇನೆ ಪೂಜೆ ಮಾಡುತ್ತೇನೆ 
ತುಪ್ಪದ ದೀಪ ಹಚ್ಚುತ್ತೇನೆ, ಕಕ್ಕುಲಾತಿಯ ಮಾತನಾಡಿ 
ಒಳ್ಳೆಯವನೆಂದೆನಿಸಿಕೊಳ್ಳುತ್ತೇನೆ. ಆದರೆ 
ಪರರ  ಏಲ್ಗೆ  ಕಂಡು ಒಳಗೊಳಗೇ  ಹಲ್ಲುಮಸೆಯುತ್ತೇನೆ.

ಬದುಕಿದ್ದೇನೆ ಬುದ್ಧಿ ಜೀವಿಯಾಗಿ

ಹದ್ದು ಬಡಿಯುತ್ತೇನೆ, ಹಾವು ಬಡಿಯುತ್ತೇನೆ 
ಕದ್ದು ಮುಚ್ಚಿ ಹೆಂಗಸರ ಎದೆಯ ನೋಡುತ್ತೇನೆ 
ಮತ್ತೆ ರಾಮ ಬುದ್ಧ, ಹನುಮನಂತೆ ಪೋಸು ಕೊಡುತ್ತೇನೆ 

ಆತ್ಮಸಾಕ್ಷಿಯ ನ್ಯಾಯಾಲಯಕ್ಕಂಜಿ 
ಎಲ್ಲವನು ಬಿಟ್ಟು ಬದಲಾಗುವ ಇಚ್ಛೆ ತೊಟ್ಟು
ಮೌನಿಯಾಗುತ್ತೇನೆ.
ಜಗತ್ತು ಒಂದೇ ಸಮನೆ ಕೇಳತೊಡಗುತ್ತದೆ
Anything wrong with you theese days ?

ಮತ್ತೆ ಬದುಕುತ್ತೇನೆ ಬುದ್ಧಿ ಜೀವಿಯಾಗಿ.

2 comments:

ಗುರು said...

ವಾಸ್ತವತೆ ಮತ್ತು ಆದರ್ಶಗಳ ನಡುವಿನ ಕಂದರ ಇಂದು ನಿನ್ನೆಯದಲ್ಲ. ಅದನ್ನು ನಾವು ವಿಶ್ಲೇಷಿಸುವ ರೀತಿ ನಮ್ಮ ಮನಸ್ಸನ್ನು ತಾಕುವಂತಿದ್ದಲ್ಲಿ ಒಬ್ಬ ಕವಿಯ ಶ್ರಮ ಸಾರ್ಥಕ. ನಿಮ್ಮ ಕಾಳಜಿ ಅನುಪಮವಾದದ್ದು. ಆ ಕಾಳಜಿಗೆ ಮತ್ತು ಅದನ್ನು ವಕ್ತಪಡಿಸುವ ನಿಮ್ಮ ಕವನಕ್ಕೆ ಅಭಿನಂದನೆಗಳು. ನಿಮ್ಮ ಲೇಖನಿಯಿಂದ ಇಂಥ ಕವನಗಳು ಸದಾ ಹರಿಯುತ್ತಿರಲಿ.