Monday, March 8, 2010

Om Beach

ನಾನು ಎನ್ನುವರೆಲ್ಲ ನಿನ್ನ ಮುಂದೊಮ್ಮೆ ಬರಲಿ
ಆ ಅರ್ಭಟ ರಭಸ ಭೋರ್ಗರೆತಗಳು
ಎಂಥವನ ಎದೆಯನ್ನೂ ನಡುಗಿಸಲೇ ಬೇಕು
ಅಷ್ಟಲ್ಲದೇ ನೀ ಜಗತ್ ಸೃಷ್ಟಿಕರ್ತಳೇ ಹೇಳು?

ನಿನ್ನ ಆಳ ಅಗಲ ಶಕ್ತಿ ಸಾಮರ್ಥ್ಯ
ಆಕಾಶ ಭೂಮಿ ಒಂದು ಮಾಡಿ ನಿಂತ ಪರಿ
ನಿನ್ನ ಅಧ್ಬುತ, ರೌದ್ರ ಮತ್ತೆ ಪ್ರಶಾಂತ ಮೌನ 
ನನ್ನ ಅಣೆ ಗಾತ್ರದ ಕಣ್ಣುಗಳಲಿ  ತುಂಬಿಕೊಳಲು 
ಹೇಗೆ ಸಾಧ್ಯ.

1 comment:

ಗುರು said...

ಕಡಲನ್ನು ಕಣ್ಣ ಮುಂದೆ ತಂದು ಇಟ್ಟಿದ್ದಕ್ಕೆ ಧನ್ಯವಾದಗಳು.