Monday, March 8, 2010

Lullaby

ಮಲಗು ಮುದ್ದಿನ ಕಂದ
ಮಲಗು ಶ್ರೀ ಗಿರಿಯ ಗೋವಿಂದ
ಮಲಗು ನನ್ನ ಇಂದ್ರ ಚಂದ್ರ- ಜೋ ಜೋ

ಬಗೆ ಬಗೆಯ ಆಟಗಳ ಆಡಿ ಆಡಿಸಿದ್ದು ಸಾಕು
ನನ್ನ ಸೋಲಿಸಿ ಅಳಿಸಿ ನಗಿಸಿದ್ದು ಸಾಕು
ಆಡಿ ಆಡಿ ಸೋತ ಕಾಲನೋತ್ತುವೆ ಮಲಗು-ಜೋ ಜೋ

ಊರ ಚೆಲುವಿಯರೆಲ್ಲ ನಿನ್ನ ನೋಡಲು ಬಂದು
ದ್ರಿಷ್ಟಿ ತಾಗಿತು ಎಂದು
ದ್ರಿಷ್ಟಿತೆಗೆಯುವೆನು ಕಂದ ಮಲಗು- ಜೋ ಜೋ

ಮನೆಯ ಕೆಲಸವ ನಿನ್ನ ಅಪ್ಪ ಮಾಡುವನೇನೋ
ಮುಪ್ಪು ಬಂದಿರೋ ಮುದುಕಿ 
ಎಷ್ಟು ಹಿಡಿವಳೋ  ನಿನ್ನ ಮಲಗು-ಜೋ ಜೋ

ಚೆಲುವು ಅಂದರೆ ನಿಂದೆ 
ಒಲವು ಅಂದರೆ ನಿಂದೆ, ಮಗನೆ
ಹಲವು ಬಗೆಯಲಿ ಹಾಡ್ವೆ ಮಲಗು-ಜೋ ಜೋ  

1 comment:

ಗುರು said...

ಲಾಲಿಹಾಡು ನವ್ಯ ಶೈಲಿಯಲ್ಲಿದೆ. ಉತ್ತಮ ಪ್ರಯತ್ನ.